ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಒಳ ಮೀಸಲಾತಿಯ ಸಮಗ್ರ ಸಮೀಕ್ಷೆಯ ಕಾರ್ಯ ವಿಧಾನವನ್ನು ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ನಡೆಸಿದ ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಬೆಂಗಳೂರು.
ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಹಿನ್ನಲೆಯಲ್ಲಿ ಸರ್ಕಾರದ ವತಿಯಿಂದ ಸಮಗ್ರ ಸಮೀಕ್ಷೆ ನಡೆಸುತ್ತಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು ಖುದ್ದಾಗಿ

ನಗರದ ಪ್ರಮುಖ ಸ್ಥಳಗಳಾದ ಮಲ್ಲೇಶ್ವರಂ, ಸದಾಶಿವನಗರ,ಮಂಜುನಾಥ ನಗರ,ಪ್ಯಾಲೆಸ್ ಗುಟ್ಟಲ್ಲಿಯಲ್ಲಿ ಮನೆ ಮನೆಗೆ ಬೇಟಿ ನೀಡಿ ಸಮೀಕ್ಷೆಯ ಕಾರ್ಯವಿಧಾನಗಳನ್ನು ಪರಿಶೀಲನೆ ನಡೆಸಿ ನಾಗರಿಕರಿಗೆ ತಮ್ಮ ತಮ್ಮ ಮೂಲ ಜಾತಿಯ ಹೆಸರನ್ನು ಸಮೀಕ್ಷೆಯಲ್ಲಿ ನೊಂದಾಯಿಸಲು ಮನವಿ ಮಾಡಿದರು.

ಸಮುದಾಯದ ನಾಗರಿಕರು ಒಂದು ವೇಳೆ ಸಮೀಕ್ಷೆಯ ಕಾರ್ಯದಲ್ಲಿ ಗೈರಾಗಿದ್ದಲ್ಲಿ ಆನ್ ಲೈನ್ ಮೂಲಕ ತಮ್ಮ ಮೂಲ ಜಾತಿಯನ್ನು ನೊಂದಾಯಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಾಸಕ ಅಭ್ಯರ್ಥಿ ಅನುಫ್ ಅಯ್ಯಂಗಾರ್, ಪ್ರವೀಣ್ ,ಮಾತಾಂಗ ಜಾಗೃತಿ ಸಮಿತಿ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ .ಜಯರಾಂ,ನಾಗರಾಜ್,ಗೋವಿಂದ ರಾಜು,ಜಗದೀಶ್,ನೀಲಕಂಠ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

About The Author